ಬೆಂಗಳೂರು: ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಮತ್ತು ಮೈಸೂರು ಸಂಸದ ಪ್ರತಾಪ್ ಸಿಂಹ ನಡುವಿನ ವಾಕ್ಸಮರ ಮುಂದುವರಿದಿದೆ. ಮೊದಲಿಗೆ ಪ್ರತಾಪ್ ಸಿಂಹ ಸುಮಲತಾ ಬಗ್ಗೆ ಅವರು ಏನೂ ಕೆಲಸ ಮಾಡಲ್ಲ ಎಂದು ಮಾತನಾಡುತ್ತಿದ್ದ ವಿಡಿಯೋ ವೈರಲ್ ಆಗಿದ್ದು ಎಲ್ಲಾ ವಿವಾದಕ್ಕೆ ಕಾರಣವಾಯಿತು. ಇದಾದ ಬಳಿಕ ಸುಮಲತಾ ಕೂಡಾ ಪ್ರತಾಪ್ ವಿರುದ್ಧ ಟ್ವಿಟರ್ ಮೂಲಕ ಪುರಂದರ ದಾಸರ ಆಚಾರವಿಲ್ಲದ ನಾಲಿಗೆ ಸಾಲುಗಳನ್ನು ಬರೆದು ಪ್ರತಿ ಟಾಂಗ್ ಕೊಟ್ಟಿದ್ದರು. ಅಲ್ಲದೆ, ಅಂಬರೀಶ್ ಇದ್ದಾಗ