ಮಂಗಳೂರು: ದುಷ್ಕರ್ಮಿಗಳಿಂದ ಹಲ್ಲೆಗೊಳಗಾದ ಅಹಮ್ಮದ್ ಬಶೀರ್ ನಗರದ ಎ.ಜೆ. ಆಸ್ಪತ್ರೆಯಲ್ಲಿ ಇಂದು (ಭಾನುವಾರ) ಬೆಳಿಗ್ಗೆ 8.05ಕ್ಕೆ ಕೊನೆಯುಸಿರೆಳೆದರು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಂಸದ ಪ್ರತಾಪ್ ಸಿಂಹ, ಕಣ್ಣಿಗೆ ಕಣ್ಣು ಎಂದು ಹೊರಟರೆ ಇಡೀ ಜಗತ್ತು ಅಂಧತ್ವದಲ್ಲಿ ಮುಳುಗುತ್ತದೆ ಎಂದು ಟ್ವೀಟಿಸಿದ್ದಾರೆ. ದೀಪಕ್ ರಾವ್ ಹತ್ಯೆಗೆ ಉತ್ತರವಾಗಿ ಬಶೀರ್ ಕೊಲೆಯಾಗುವುದು ಸರಿಯಲ್ಲ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಶಾಂತಿ ನೆಲೆಸಲು ಸೂಕ್ತ ಕ್ರಮಕೈಗೊಳ್ಳುವುದರ ಕುರಿತು ಚಿಂತಿಸಿಲ್ಲ, ಹಿಂದೂ–ಮುಸಲ್ಮಾನರ ನಡುವೆ ಶಾಂತಿ ಸಭೆ