ಗರ್ಭಿಣಿ ಹಾಗೂ ಮಹಿಳೆಯೊಬ್ಬರ ಮೇಲೆ ಮಾಡಬಾರದ ಕೆಲಸವನ್ನು ದುಷ್ಕರ್ಮಿಗಳು ಮಾಡಿದ್ದಾರೆ.ನಸುಕಿನ ವೇಳೆ ವಾಯ ವಿಹಾರಕ್ಕೆ ಆಗಮಿಸಿದ ಇಬ್ಬರು ಮಹಿಳೆಯರ ಕಣ್ಣಿಗೆ ಖಾರದ ಪುಡಿ ಎರಚಿ ಕೊಲೆ ಮಾಡಲಾಗಿದೆ.ಬೆಳಗಾವಿಯ ಮಚ್ಚೆಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕೊಲೆಯಾದವರಲ್ಲಿ ಗರ್ಭಿಣಿಯೊಬ್ಬರು ಸೇರಿದ್ದಾರೆ. ಬೈಕ್ ಮೇಲೆ ಬಂದಿದ್ದ ದುಷ್ಕರ್ಮಿಗಳು ಮಹಿಳೆಯರನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ.