ರಾಜ್ಯದಲ್ಲಿ ಸಂಪೂರ್ಣ ಪಾನ ನಿಷೇಧ ಮಾಡುವಂತೆ ಒತ್ತಾಯ ಕೇಳಿಬರುತ್ತಿದೆ. ಡಿಸೆಂಬರ್ 7 ರ ಬೆಳಿಗ್ಗೆ 9.45 ಕ್ಕೆ ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆಯಿಂದ ತಹಸೀಲ್ದಾರ ಕಚೇರಿ ವರೆಗೆ ಮೌನ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಹೀಗಂತ ನಗರದ ಮದ್ಯ ವಿರೋಧಿ ಆಂದೋಲನ ಡಾ.ವೀಣಾ ಮಾಧವ ಹೇಳಿದ್ದಾರೆ. ರಾಷ್ಟ್ರಪಿತ ಮಹತ್ಮಾ ಗಾಂಧಿ ಅವರ ಕನಸಾದ ಸಂಪೂರ್ಣ ಪಾನ ಪ್ರತಿಬಂಧದಡೆಗೆ ಸಾಗಬೇಕು ಎಂಬಂತೆ ಅವರ 150 ನೇ ಜನ್ಮ ದಿನದ ಹಿನ್ನಲೆಯಲ್ಲಿ ಸರಕಾರ ಮದ್ಯ ಬ್ಯಾನ್ ಮಾಡಬೇಕು.