Widgets Magazine

ಇಡೀ ದೇಶವೇ 3 ವಾರ ಲಾಕ್ ಡೌನ್ ಎಂದ ಪ್ರಧಾನಿ ಮೋದಿ

ನವದೆಹಲಿ| Jagadeesh| Last Modified ಮಂಗಳವಾರ, 24 ಮಾರ್ಚ್ 2020 (21:08 IST)

ವಿಶ್ವಕ್ಕೆ ಮಾರಕವಾಗಿರುವ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಇಡೀ ದೇಶವನ್ನು ಮೂರು ವಾರಗಳ ಕಾಲ ಲಾಕ್ ಡೌನ್ ಮಾಡಲಾಗ್ತಿದೆ ಎಂದು ಪ್ರಧಾನಿ ಮೋದಿ ಘೋಷಣೆ ಮಾಡಿದ್ದಾರೆ.

 

ಕೊರೊನಾ ವೈರಸ್ ಕುರಿತು ಎರಡನೇ ಬಾರಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ, ಕೊರೊನಾ ಪಿಡುಗು ಜಾಗತಿಕ ಸವಾಲಾಗಿದೆ. ಈಗ ನಾವು ಎಚ್ಚೆತ್ತುಕೊಳ್ಳದಿದ್ದರೆ ದೇಶ ಉಳಿಯೋದಿಲ್ಲ ಅಂತ ಹೇಳಿದ್ದಾರೆ.

ವಯಕ್ತಿಕ ಸ್ವಚ್ಛತೆ, ಸೋಶಿಯಲ್ ಡಿಸ್ಟನ್ಸ್ ಮೆಂಟೈನ್ ಮಾಡಬೇಕು. ಮೂರು ವಾರಗಳ ಕಾಲ ಯಾರೂ ಮನೆಯಿಂದ ಹೊರ ಬರಬಾರದು. ಇದು ನಿಮಗಾಗಿ, ನಿಮ್ಮ ಕುಟುಂಬದವರ ಉಳಿವಿಗಾಗಿ. ನಾನು ಪ್ರಧಾನಿಯಾಗಿ ಈ ಮಾತು ಹೇಳುತ್ತಿಲ್ಲ. ನಿಮ್ಮ ಕುಟುಂಬದ ಸದಸ್ಯನಾಗಿ ಹೇಳುತ್ತಿರುವೆ ಎಂದಿದ್ದಾರೆ.

ಮಧ್ಯರಾತ್ರಿ 12 ಗಂಟೆಯಿಂದಲೇ ದೇಶ ಲಾಕ್ ಡೌನ್ ಆಗಲಿದೆ ಎಂದು ಪ್ರಧಾನಿ ಹೇಳಿದ್ದಾರೆ.

 

 

ಇದರಲ್ಲಿ ಇನ್ನಷ್ಟು ಓದಿ :