ಪ್ರಧಾನಿ ಮೋದಿ ಹತ್ಯೆಗೆ ಸಂಚು!

ನವದೆಹಲಿ| Jagadeesh| Last Modified ಶುಕ್ರವಾರ, 19 ಅಕ್ಟೋಬರ್ 2018 (22:26 IST)
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪ್ರಾಣ ಬೆದರಿಕೆ ಇರುವ ಇ ಮೇಲ್ ಸಂದೇಶಗಳು ಒಂದಾದ ಮೇಲೆ ಒಂದರಂತೆ ಬರುತ್ತಿವೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಾಣ ಬೆದರಿಕೆ ಒಡ್ಡುವ ಇ ಮೇಲ್ ಸಂದೇಶಗಳು ಒಂದಾದ ಮೇಲೆ ಒಂದರಂತೆ ಬರುತ್ತಿರುವುದು ಪೊಲೀಸರು ಹಾಗೂ ಭದ್ರತಾ ಪಡೆಗಳ ನಿದ್ದೆಗೆಡಿಸಿವೆ.

ಈಚೆಗೆ ಪ್ರಧಾನಿ ಮೋದಿ ಅವರನ್ನು ಹತ್ಯೆ ಮಾಡುವುದಾಗಿ ಪೊಲೀಸ್ರಿಗೆ ಇ ಮೇಲ್ ಬಂದಿತ್ತು. ಈಗ ಮತ್ತೆ ಇ ಮೇಲ್ ಸಂದೇಶ ಬಂದಿದೆ. ಹೀಗಾಗಿ ಪ್ರಧಾನಿ ನಿವಾಸ ಸೇರಿದಂತೆ ರಾಜಧಾನಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ‘

ಈ ಮೊದಲು ಬಂದ ಇ ಮೇಲ್ ಅಸ್ಸಾಂ ರಾಜ್ಯದ ಕೊಚ್ಚಾರ ಜಿಲ್ಲೆಯಿಂದ ಬಂದಿದೆ ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಇದೀಗ ಮತ್ತೊಂದು ಇ ಮೇಲ್ ಬಂದಿದೆ. ಈ ಮೇಲ್ ನೇಪಾಳದ ಪೋಕಾರದಿಂದ ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದರಲ್ಲಿ ಇನ್ನಷ್ಟು ಓದಿ :