ಅಪ್ರಾಪ್ತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಜೈಲು ಸೇರಿರುವ ನಾಲ್ವರು ಆರೋಪಿಗಳಿಗೆ ಅಲ್ಲಿನ ಕೈದಿಗಳು ತಕ್ಕ ಪಾಠ ಕಲಿಸಿದ ಘಟನೆ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ನಡೆದಿದೆ. ನಿಮಗೆ ಅಕ್ಕತಂಗಿಯರಿಲ್ಲವೇ? ನಿಮ್ಮದು ಮನುಷ್ಯ ಜನ್ಮವಾ ಎಂದು ಕಿರುಚಾಡಿದ ಕೈದಿಗಳು ಕೋಪದ ಭರದಲ್ಲಿ ನಾಲ್ಕೇಟು ಸಹ ಹಾಕಿದ್ದಾರೆ. ಬಳಿಕ ಈ ನಾಲ್ವರು ಆರೋಪಿಗಳಿಗೆ ಜೈಲಿನ ಶೌಚಾಲಯ ತೊಳೆಯುವ ಕೆಲಸಕ್ಕೆ ಹಚ್ಚಿದ್ದಾರೆ. ಪ್ರೇಮಿಗಳ ದಿನದ ಮರುದಿನ ಬೆಳಗಾವಿಯ ಹೊರವಲಯದ ಕಾಕತಿ ಪ್ರದೇಶದಲ್ಲಿ