ವಿಚಾರಣಾಧೀನ ಕೈದಿಗಳು ಶೌಚಾಲಯ ಕಿಟಕಿ ಮುರಿದು ಪರಾರಿಯಾಗಿರೋ ಘಟನೆ ನಡೆದಿದೆ.ಇಬ್ಬರು ವಿಚಾರಣಾಧೀನ ಕೈದಿಗಳು ಪರಾರಿಯಾಗಿದ್ದಾರೆ.ಬೆಳಗಾವಿ ಜಿಲ್ಲೆಯ ಹುಕ್ಕೇರಿ ಸಬ್ ಜೈಲಿನ ಕಿಟಕಿ ಮುರಿದು ಪರಾರಿಯಾಗಿದ್ದಾರೆ ಕೈದಿಗಳು.ಮಾಂಜರಿ ಗ್ರಾಮದ ನಿವಾಸಿ ಅನೀಲ ಲಂಬುಗೋಳ ಹಾಗೂ ಕೊಣ್ಣೂರ ಗ್ರಾಮದ ನಿವಾಸಿ ಪರಶುರಾಮ ಕಮತೆಕರ ಪರಾರಿಯಾಗಿರೋ ಕೈದಿಗಳಾಗಿದ್ದಾರೆ.ಮನೆ ಕಳ್ಳತನ ಆರೋಪದಡಿ ಇವರು ಜೈಲು ಸೇರಿದ್ದರು. ಶೌಚಾಲಯದ ಕಿಟಕಿ ಮುರಿದು ಪರಾರಿಯಾಗಿರುವ ಕೈದಿಗಳನ್ನು ಬಂಧಿಸಲು ಪೊಲೀಸರು ಶೋಧಕಾರ್ಯ ತೀವ್ರಗೊಳಿಸಿದ್ದಾರೆ.