ಮಂಗಳೂರು:ಪರಪ್ಪನ ಅಗ್ರಹಾರ ಜೈಲಿನಲ್ಲಿನ ಅವ್ಯಹಾರ ಬೆಳಕಿಗೆ ಬರುತ್ತಿರುವ ಬೆನ್ನಲ್ಲೇ ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲೂ ವಿಚಾರಣಾಧೀನ ಕೈದಿಗಳ ಗುಂಪೊಂದು ಸಾಮೂಹಿಕವಾಗಿ ಮಾಂಸದೂಟ ಸವಿಯುತ್ತಿದ್ದಾರೆ ಎನ್ನಲಾದ ಫೋಟೊ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಕೈದಿಗಳ ಭೇಟಿಗಾಗಿ ಬರುತ್ತಿರುವ ಅವರ ಸಂಬಂಧಿಕರು, ಹಿತೈಷಿಗಳು ಭರ್ಜರಿ ಮಾಂಸದೂಟ, ಬಿರಿಯಾನಿ,ಎಣ್ಣೆ ಇತ್ಯಾದಿಗಳನ್ನು ಜೈಲು ಸಿಬಂದಿ ಮೂಲಕ ಕೈದಿಗಳಿಗೆ ಒದಗಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಅಲ್ಲದೇ ಕೈದಿಗಳಿಗೆ ಪೂರೈಸುವ ಆಹಾರದ ಪೊಟ್ಟಣದಲ್ಲಿ ಗಾಂಜಾ ಮತ್ತು ಇತರ ಮಾದಕ