ಬೆಂಗಳೂರು: ಡಿಐಜಿ ರೂಪಾ ಅವರ ವರ್ಗಾವಣೆಯನ್ನು ಖಂಡಿಸಿ ಹಾಗೂ ವರ್ಗಾವಣೆ ಆದೇಶವನ್ನು ಸರ್ಕಾರ ಹಿಂಪಡೆದುಕೊಳ್ಳಬೇಕೆಂದು ಪರಪ್ಪನ ಅಗ್ರಹಾರ ಜೈಲಿನಲ್ಲಿ 200 ಕ್ಕೂ ಹೆಚ್ಚು ಕೈದಿಗಳು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ರೂಪಾ ಅವರ ಪರವಾಗಿದ್ದ 200 ಕ್ಕೂ ಹೆಚ್ಚು ಕೈದಿಗಳು ಇಂದು ಬೆಳಗ್ಗಿನ ಉಪಹಾರ ಸ್ವೀಕರಸಿದೆ ಪ್ರತಿಭಟಿಸುತ್ತಿದ್ದಾರೆ. ಅಲ್ಲದೇ ಜೈಲಿನ ಅಧಿಕ್ಷಕಿ ಅನಿತಾ ಆರ್ ಅವರನ್ನು ಹುದ್ದೆಯಲ್ಲಿ ಮುಂದುವರಿಸಬಾರದು, ಅವರು ಶಶಿಕಲಾಗೆ ನೆರವು ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ ಎಂದು ತಿಳಿದುಬಂದಿದೆ.