ಬೆಂಗಳೂರು: ಒಂದೆಡೆ ಗಡಿಯಲ್ಲಿ ಚೀನಾ ಕಾಲ್ಕೆರೆದು ಜಗಳ ತೆಗೆಯುತ್ತಿದ್ದರೆ, ರಾಜ್ಯ ರಾಜಧಾನಿಯ ಶಾಲೆಯೊಂದರಲ್ಲಿ ಚೀನಾ ಹೊಸ ವರ್ಷಾಚರಣೆ ಮಾಡಲು ಹೊರಟಿರುವುದು ವಿವಾದಕ್ಕೀಡು ಮಾಡಿದೆ.ಖಾಸಗಿ ಶಾಲೆಯೊಂದರಲ್ಲಿ ಆಗಸ್ಟ್ 11 ರಂದು ಚೀನಾದ ಹೊಸ ವರ್ಷಾಚರಣೆ ಆಚರಿಸಲು ತೀರ್ಮಾನಿಸಲಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಚೀನಾದ ಪೋಷಾಕು ಧರಿಸಲು ಸೂಚಿಸಲಾಗಿದೆ. ಕನಿಷ್ಠ ಕೆಂಪು ಬಣ್ಣದ ಉಡುಪು ಧರಿಸಿರಬೇಕು ಮತ್ತು ಚಿನ್ನ, ಬೆಳ್ಳಿ ಆಭರಣಗಳನ್ನು ತೊಟ್ಟು ಬರಬೇಕು ಎಂದು ಶಾಲಾ ಆಡಳಿತ ಮಂಡಳಿ ಸೂಚಿಸಿದೆ ಎಂದು