ಸರ್ಕಾರ 9ನೇ ತರಗತಿಯವರೆಗೂ ವಿದ್ಯಾರ್ಥಿಗಳನ್ನ ಯಾವುದೇ ಕಾರಣ ಕೊಟ್ಟು ಫೇಲ್ ಮಾಡಬಾರದೆಂದು ನಿಯಮ ಮಾಡಿದ್ದರೂ UKG ಮಗುವನ್ನ ಖಾಸಗಿ ಶಾಲೆಯೊಂದು ಫೇಲ್ ಮಾಡಿತ್ತು. UKG ಮಗುವನ್ನ ಫೇಲ್ ಮಾಡಿ ಸೆಂಟ್ ಜೋಸೆಫ್ ಚಾಮಿನೇಡ್ ಅಕಾಡೆಮಿ ಶಾಲೆ ಹೊಸ ವಿವಾದಕ್ಕೆ ಗುರಿಯಾಗಿತ್ತು. ಬೆಂಗಳೂರಿನ ಆನೇಕಲ್ನಲ್ಲಿರುವ ಸೆಂಟ್ ಜೋಸೆಫ್ ಚಾಮಿನೇಡ್ ಅಕಾಡೆಮಿ ಶಾಲೆ UKG ಓದುತ್ತಿದ್ದ 6 ವರ್ಷದ ನಂದಿನಿಯನ್ನ ಫೇಲ್ ಮಾಡಿತ್ತು. ಇದರಿಂದ ಗಾಬರಿಗೊಂಡ, ಮಗುವಿನ ಪೋಷಕರು ಸ್ಕೂಲ್ ಮ್ಯಾನೇಜ್ಮೆಂಟ್ನ್ನು ಸಂಪರ್ಕಿಸಿದ್ರೂ