ಯಾದಗಿರಿ : ತಂದೆ ಮಲ್ಲಿಕಾರ್ಜುನ ಖರ್ಗೆ ಅಕ್ರಮ ಆಸ್ತಿ ಹೊಂದಿದ್ದಾರೆಂಬ ಬಿಜೆಪಿ ನಾಯಕರ ಆರೋಪಕ್ಕೆ ಖರ್ಗೆ ಪುತ್ರ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿಯವರಿಗೆ ಬಹಿರಂಗವಾಗಿ ಸವಾಲೊಂದನ್ನು ಹಾಕಿದ್ದಾರೆ. ಯಾದಗಿರಿಯ ಹತ್ತಿಕುಣಿ ಗ್ರಾಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಮ್ಮ ಕುಟುಂಬದ ಆಸ್ತಿ 50 ಸಾವಿರ ಕೋಟಿ ಇದ್ದರೆ ಬಿಜೆಪಿಯವರು ಅವರು ಅದನ್ನು ಸಾಬೀತು ಪಡಿಸಲಿ. ಆಸ್ತಿ ಹೊಂದಿದ್ದು ನಿಜವಾದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಇದು ಸುಳ್ಳಾದರೆ ಅವರು ರಾಜಕೀಯ