ಪ್ರೊ.ಭಗವಾನ್ ಮತ್ತು ಪ್ರೊ, ಮಹೇಶ್ಚಂದ್ರಗುರು ಸಮಾಜಕ್ಕೆ ಕಳಂಕವಾಗಿದ್ದಾರೆ ಎಂದು ಮೈಸೂರು-ಕೊಡಗು ಬಿಜೆಪಿ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ. ಕಲಾಮಂದಿರದಲ್ಲಿ ಗೋಮಾಂ ಸೇವಿಸಿರುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸಾಹಿತಿಗಳೆಲ್ಲರು ಒಂದೆಡೆ ಸೇರಿ ಸಮಾಜದ ಸ್ವಾಸ್ಥಹಾಳು ಮಾಡುವಲ್ಲಿ ನಿರತರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರೊ. ಮಹೇಶ್ಚಂದ್ರ ಗುರು ಸರಕಾರಿ ಸೇವೆಯಲ್ಲಿದ್ದು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ರಾಜ್ಯಪಾಲರು ಕೂಡಲೇ ಅವರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.