ಭಾರತದ ಸರ್ವೋಚ್ಛ ನ್ಯಾಯಾಲಯವು ಸಿವಿಲ್ ಪಿಟಿಷನ್ ಸಂ.728/2015ರಲ್ಲಿ ಕಳೆದ ಅಕ್ಟೋಬರ್ 23, 30 ಹಾಗೂ 31ರಂದು ನೀಡಿದ ತೀರ್ಪಿನನ್ವಯ ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಮತ್ತು ಪಟಾಕಿ ಸಿಡಿತದಿಂದ ಉಂಟಾಗುವ ಘನತ್ಯಾಜ್ಯ ವಸ್ತುಗಳ ಮಾಲಿನ್ಯ ತಡೆಯಲು ಸರಣಿ ಸ್ಪೋಟಕ ಪಟಾಕಿಗಳು ತಯ್ಯಾರಿಸುವುದು, ಮಾರಾಟ ಮತ್ತು ಬಳಸುವುದನ್ನು ನಿಷೇಧಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಇಂತಹ ಪಟಾಕಿಗಳನ್ನು ನಿಷೇಧಿಸಲಾಗಿದೆ ಎಂದು ಡಿಸಿ ತಿಳಿಸಿದ್ದಾರೆ.