ಬೆಂಗಳೂರಿಗೆ ನನ್ನ ಕೊಡುಗೆ ಸಾಕಷ್ಟು ಇದೆ. ದಾಬಸ್ಪೇಟೆ, ಹೊಸಕೋಟೆಯಲ್ಲಿ ರಿಂಗ್ ರೋಡ್ ಮಾಡಿದ್ದೇನೆ. 7 ಗ್ರಾಮ ಪಂಚಾಯತಿ ಜನರಿಗೆ ಕುಡಿಯುವ ನೀರು, ಸರಿಯಾದ ರಸ್ತೆ ಇರಲಿಲ್ಲ. ಅದನ್ನ ಬಿಬಿಎಂಪಿಗೆ ಸೇರಿಸಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದ್ದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದರು. ಬೆಂಗಳೂರಿನ JDS ಕಚೇರಿ ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನಾಳೆಯಿಂದ ಮೇ 8ರವರೆಗೆ 62 ಕಡೆ ತಾತ್ಕಾಲಿಕ ಕಾರ್ಯಕ್ರಮ ನಿಗದಿಯಾಗಿದ್ದು, ವಾರದಲ್ಲಿ ಒಂದು ದಿನ ಆರೋಗ್ಯದ