ಲಂಚದ ಆರೋಪ ಮಾಡುವಾಗ ಲಂಚ ನೀಡಿದ್ಕಕೆ ಮತ್ತು ಸರ್ಕಾರಿ ಅಧಿಕಾರಿ ಲಂಚ ಪಡೆದಿದ್ದಕ್ಕೆ ಸಾಕ್ಷಿ ಇರಬೇಕಾದ್ದು ಅತ್ಯಗತ್ಯ ಎಂದು ಹೈಕೋರ್ಟ್ ಹೇಳಿದೆ. ಗದಗದ ನಿವೃತ್ತ ಸಬ್ ರಿಜಿಸ್ಟ್ರಾರ್ ಶ್ರೀಕಾಂತ್ ವಿರುದ್ದ ಎಸಿಬಿ ದಾಖಲಿಸಿದ್ದ ಆರೋಪವನ್ನು ಇದೇ ಆಧಾರದ ಮೇಲೆ ಹೈಕೋರ್ಟ್ ರದ್ದುಪಡಿಸಿದೆ.