ಹುಬ್ಬಳ್ಳಿ : ಜಮೀನಿಗಾಗಿ ವ್ಯಕ್ತಿಯೊಬ್ಬ ಒಡಹುಟ್ಟಿದ ಅಣ್ಣನನ್ನೇ ದೀಪಾವಳಿ ಹಬ್ಬದಂದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯ ಗೋಕುಲ ಗ್ರಾಮದಲ್ಲಿ ನಡೆದಿದೆ. ಭೀಮಶಿ ಬೆಂಗೇರಿ (36) ಕೊಲೆಯಾದ ದುರ್ದೈವಿ, ಬಸು ಬೆಂಗೇರಿ (34) ಕೊಲೆ ಮಾಡಿದ ಆರೋಪಿ. ಇವರಿಬ್ಬರು ಇತ್ತೀಚೆಗಷ್ಟೇ ಜಮೀನನ್ನು ಭಾಗ ಮಾಡಿಕೊಂಡಿದ್ದರು. ಆದರೆ ಬಸು ಬೆಂಗೇರಿ ಕೇಳಿದ್ದ ಜಮೀನನ್ನು ಭೀಮಶಿ ಬಿಟ್ಟುಕೊಟ್ಟಿರಲಿಲ್ಲ. ಈ ಬಗ್ಗೆ ಇಬ್ಬರಿಗೂ ಆಗಾಗ ಜಗಳವಾಡುತ್ತಿದ್ದರು. ನಂತರ ಕಳೆದ ಎರಡು ದಿನಗಳ ಹಿಂದೆ ಗ್ರಾಮದ