ಮೈಸೂರು : ಮೈಸೂರು ನಗರದಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಜಾಲವನ್ನು ಪತ್ತೆ ಹಚ್ಚಿ ದಾಳಿ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ, ಮಹಿಳೆಯೊಬ್ಬಳನ್ನು ರಕ್ಷಣೆ ಮಾಡಿದ್ದಾರೆ. ಕಲ್ಯಾಣಗಿರಿಯ ಸುನೀತಾ (43), ಗಾಂಧಿನಗರದ ಕುಮಾರ (33) ಹಾಗೂ ಸಿದ್ದಲಿಂಗಪುರ ಗ್ರಾಮದ ಮಧುಸೂದನ್ (24) ಬಂಧಿತ ಆರೋಪಿಗಳು. ಈ ಮೂವರು ಕಲ್ಯಾಣಗಿರಿಯ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಂಡ ರಚಿಸಿಕೊಂಡು ಅಡ್ಡದ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಸಿದ್ದಾರೆ.