ಕೆಲಸ ಕೊಡಿಸುವುದಾಗಿ ಪುಸಲಾಯಿಸಿ ಹೊರ ರಾಜ್ಯದ ಮಹಿಳೆಯರನ್ನು ನಗರಕ್ಕೆ ಕರೆತಂದು ವೇಶ್ಯಾವಾಟಿಕೆ ದಂಧೆಗೆ ದೂಡುತ್ತಿದ್ದ ರೌಡಿಶೀಟರ್ವೊಬ್ಬನನ್ನು ಸಿಸಿಬಿ ವಿಶೇಷ ಮಹಿಳಾ ಸಂರಕ್ಷಣಾ ದಳದ ಅಧಿಕಾರಿಗಳು ಗೂಂಡಾ ಕಾಯಿದೆಯಡಿ ಬಂಧಿಸಿದ್ದಾರೆ. ಎಂ.ಎನ್. ನವೀನ್ (28) ಬಂಧಿತ ಆರೋಪಿ. ಈತನು ಮೂಲತಃ ಮಂಡ್ಯ ಜಿಲ್ಲೆಯವನಾಗಿದ್ದು, ನಗರದಲ್ಲಿ ನೆಲೆಸಿ, ತನ್ನ ಸಹಚರರ ಮೂಲಕ ಹೊರ ರಾಜ್ಯದ ಯುವತಿಯರನ್ನು ಕರೆತಂದು ಹೋಟೆಲ್, ಲಾಡ್ಜ್ಗಳಲ್ಲಿ ಇಡುತ್ತಿದ್ದ. ಬಳಿಕ ಹಣವಿರುವ ಗಿರಾಕಿಗಳಿಗೆ ಈ ಯುವತಿಯರನ್ನು ಕಳುಹಿಸಿ ಅಕ್ರಮವಾಗಿ ಹಣ