ಸಿನಿಮಾ ಶೂಟಿಂಗ್ ನಲ್ಲಿ ಸ್ಫೋಟ ಪ್ರಕರಣ; ಟವರ್ ಏರಿದ ಮನೆಮಂದಿ

ದೇವನಹಳ್ಳಿ, ಸೋಮವಾರ, 1 ಏಪ್ರಿಲ್ 2019 (19:22 IST)

ಸಿನಿಮಾ ಶೂಟಿಂಗ್ ವೇಳೆ ಸಿಲಿಂಡರ್ ಸ್ಫೋಟಗೊಂಡು ಇಬ್ಬರ ದುರ್ಮರಣವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಕ್ಕಾಗಿ ಆಗ್ರಹ ಮಾಡಿ ಮೃತರ ಕುಟುಂಬದವರು ಟವರ್ ಏರಿದ ಘಟನೆ ನಡೆದಿದೆ.

ಮೊಬೈಲ್ ಟವರ್ ಏರಿ ಮೃತರ  ಕುಟುಂಬಸ್ಥರಿಂದ ಪ್ರತಿಭಟನೆ ನಡೆಯಿತು. ಬೆಂಗಳೂರು ಉತ್ತರ ತಾಲೂಕಿನ ಬಾಗಲೂರಿನಲ್ಲಿರುವ ಮೊಬೈಲ್ ಟವರ್ ಏರಿ ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದ್ರು. ಘಟನೆಯಲ್ಲಿ ಇಬ್ಬರು ಸಾವನ್ನಪಿದ್ರು ಸೌಜನ್ಯಕ್ಕೂ ಮೃತರ ಕುಟುಂಬಸ್ಥರನ್ನ ಭೇಟಿಯಾಗಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದ್ರು.

ಸರ್ಕಾರ, ಚಿತ್ರತಂಡ ಹಾಗೂ ಸ್ಥಳೀಯ ಜನ ಪ್ರತಿನಿಧಿಗಳು ಮತ್ತು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ನ್ಯಾಯ ಸಿಗೋವರೆಗೂ ಟವರ್ ನಿಂದ ಕೆಳಗಿಳಿಯಲ್ಲ ಅಂತ ಪಟ್ಟು ಹಿಡಿದರು.

ಶುಕ್ರವಾರ ಬಾಗಲೂರು ಹೊರವಲಯದ ಹಾರ್ಡ್ವೇರ್ ಪಾರ್ಕ್ನಲ್ಲಿ ಶೂಟಿಂಗ್ ವೇಳೆ ಮೃತ ಪಟ್ಟಿದ್ದರು ತಾಯಿ ಮಗು. ಘಟನೆ ನಡೆದು ಮೂರು ದಿನಗಳಾದ್ರು ನ್ಯಾಯ ಕೊಡ್ತಿಲ್ಲ ಅಂತ ಆಕ್ರೋಶ ವ್ಯಕ್ತವಾಗುತ್ತಿದೆ. ಚಿತ್ರತಂಡದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ನಿರ್ಲಕ್ಷ್ಯ ವಹಿಸಿರುವುದಾಗಿ ಮೃತರ ಕುಟುಂಬದವರು ದೂರಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕೇಂದ್ರ ಸರ್ಕಾರದ ಧೋರಣೆ ಇಂಚಿಂಚು ಬಿಚ್ಚಿಡಿ ಎಂದ ಸಂಸದ

ಕೇಂದ್ರ ಸರ್ಕಾರದ ಧೋರಣೆಯನ್ನು ಇಂಚಿಂಚು ಬಿಚ್ಚಿಡುವುದರ ಮೂಲಕ, ಕೋಮುವಾದಿ ಬಿಜೆಪಿಯನ್ನ ಸೋಲಿಸಬೇಕು. ...

news

ಗೆಳೆಯರ ಮಂದೆ ನೃತ್ಯ ಮಾಡದ ಪತ್ನಿಯನ್ನು ನಗ್ನಗೊಳಿಸಿ ತಲೆಬೋಳಿಸಿದ ಪತಿ

ಲಾಹೋರ್: ಪಾಕಿಸ್ತಾನದ ಲಾಹೋರ್‌ನಲ್ಲಿ ಆಘಾತಕಾರಿ ಘಟನೆ ನಡೆದಿದ್ದು ಪತಿಯ ಗೆಳೆಯರ ಮುಂದೆ ನೃತ್ಯ ಮಾಡಲು ...

news

ಸಿಂಪತಿಗಾಗಿ ಸುಮಲತಾ ಡಿಸಿ ತೇಜೋವಧೆ ಮಾಡ್ತಿದ್ದಾರಂತೆ…

ಸಿಂಪಥಿ ಗೈನ್ ಮಾಡೋಕ್ಕೋಗಿ ಜಿಲ್ಲಾಧಿಕಾರಿಗಳ ತೇಜೋವಧೆ ಮಾಡಲು ಹೊರಟಿದ್ದಾರೆ. ಜಿಲ್ಲಾಧಿಕಾರಿಗಳನ್ನು ...

news

ರಾಜಕೀಯ ಬಿಡ್ತೀನಿ ಎಂದ ಸಚಿವ ತಮ್ಮಣ್ಣ

ಚುನಾವಣೆ ಸಮಯದಲ್ಲಿನ ಪ್ರಚಾರದ ವೇಳೆ ನಾನು ರಾಜಕೀಯ ಬಿಟ್ಟುಬಿಡ್ತೀನಿ ಎಂದು ಸಚಿವರೊಬ್ಬರು ಹೇಳಿದ್ದಾರೆ.