ಬೆಂಗಳೂರು:ಮುಸ್ಸಂಜೆ ಮಹೇಶ್ ನಿರ್ದೇಶನದ ಜಿಂದಾ ಸಿನಿಮಾದ ಟ್ರೇಲರ್ನಲ್ಲಿ ನಟಿ ಮೇಘನಾ ರಾಜ್ ಹುಡುಗರನ್ನು ಕುರಿತು ಹೇಳಿರುವ ಸಂಭಾಷಣೆ ಖಂಡಿಸಿ ಜನ್ಮಭೂಮಿ ಸಂಘಟನೆ ನೇತೃತ್ವದಲ್ಲಿ ಯುವಕರು ಮೇಘನಾ ರಾಜ್ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಜೆಪಿ ನಗರದಲ್ಲಿರುವ ಮೇಘನಾ ರಾಜ್ ಮನೆಮುಂದೆ ಪ್ರತಿಭಟಿಸುತ್ತಿರುವ ಯುವಕರು ಮೇಘನಾರಾಜ್ ವಿರುದ್ಧ ಧಿಕ್ಕಾರದ ಘೋಷಣೆ ಕೂಗುತ್ತಿದ್ದು, ವಿವಾದಿತ ಸಂಭಾಷಣೆಗೆ ಸಂಬಂಧಿಸಿದಂತೆ ಮೇಘನಾ ಕ್ಷಮೆ ಕೇಳಬೇಕೆಂದು ಪಟ್ಟು ಹಿಡಿದಿದ್ದಾರೆ. ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿರುವ ನಟಿ