ಅಕ್ರಮ ಸಾರಾಯಿ ದಾಸ್ತಾನು ಹಾಗೂ ಮಾರಾಟದ ವಿರುದ್ಧ ರೊಚ್ಚಿಗೆದ್ದ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ಕಾರವಾರ ಜಿಲ್ಲೆಯ ಸಿದ್ದಾಪುರ ತಾಲೂಕಿನ ಇಟಗಿಯಲ್ಲಿ ಜರುಗಿದೆ.ಹಲವಾರು ವರ್ಷಗಳಿಂದ ಅಕ್ರಮ ಸಾರಾಯಿ ಜಾಲ ತಾಲೂಕಿನಾದ್ಯಂತ ತಲೆ ಎತ್ತಿದ್ದು, ಇದನ್ನು ತಡೆಯಬೇಕಾದ ಅಬಕಾರಿ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಈ ಅಕ್ರಮ ಸಾರಾಯಿಯಿಂದ ಇಲಾಖೆಗೂ ಹಣ ಸಂದಾಯವಾಗುತ್ತಿದ್ದು, ಇಲಾಖೆ ಕೂಡ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದೆ. ನಾವು ಈಗಾಗಲೇ ಹಲವಾರು ಬಾರಿ ಮನವಿ ಸಲ್ಲಿಸಿದರೂ ಕೂಡ ಅಕ್ರಮ ಸಾರಾಯಿ