8 ವರ್ಷದ ಬಾಲಕಿ ದಿವ್ಯಾ ಮೇಲಿನ ಅತ್ಯಾಚಾರ ಪ್ರಕರಣ ಖಂಡಿಸಿ ಎಬಿವಿಪಿ ನೇತೃತ್ವದಲ್ಲಿ ನಾವುಂದ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ನಾವುಂದ ರಿಚರ್ಡ್ ಅಲ್ಮೇಡಾ ಮೆಮೋರಿಯಲ್ ಪಿಯು ಕಾಲೇಜು ಹಾಗೂ ನಾವುಂದ ಸರ್ಕಾರಿ ಪಿಯು ಕಾಲೇಜು ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಕಾಲೇಜಿನಿಂದ ರ್ಯಾಲಿ ಮೂಲಕ ಹೊರಟ ವಿದ್ಯಾರ್ಥಿಗಳು ಕುಂದಾಪುರದ ನಾವುಂದ ಪಂಚಾಯತ್ ಗೆ ತೆರಳಿ ಮನವಿ ಸಲ್ಲಿಸಿದರು. ವಿದ್ಯಾರ್ಥಿನಿಗಳಾದ ಸುನೀತಾ ಹಾಗೂ ಅನುಷಾ ಮಾತನಾಡಿ ಅತ್ಯಾಚಾರವೆಸಗುವ