ಲೋಕಸಭಾ ಉಪ ಚುನಾವಣೆ: ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

ಮಂಡ್ಯ, ಶುಕ್ರವಾರ, 12 ಅಕ್ಟೋಬರ್ 2018 (18:50 IST)

ಲೋಕಸಭಾ ಉಪ ಚುನಾವಣೆಗೆ ಅಭ್ಯರ್ಥಿ ಘೋಷಣೆ ಬೆನ್ನಲ್ಲೇ ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ ನಡೆದಿದೆ.
ಮಂಡ್ಯದ ಸುಭಾಷ್ ನಗರದಲ್ಲಿರೋ ಬಿಜೆಪಿ ಕಚೇರಿ ಮುಂದೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಡಾ.ಸಿದ್ದರಾಮಯ್ಯ ಅವ್ರನ್ನು ಉಪಚುನಾವಣೆಗೆ ಅಭ್ಯರ್ಥಿಯನ್ನಾಗಿ  ಘೋಷಣೆ ಮಾಡಿರೋದ್ರಿಂದ ಬಿಜೆಪಿ ಕಾರ್ಯಕರ್ತರ ಆಕ್ರೋಶ ಮುಗಿಲುಮುಟ್ಟಿದೆ.

ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆಗೆ ಮುಂದಾದ ಬಿಜೆಪಿ ಕಾರ್ಯಕರ್ತರು, ಪಕ್ಷದ ಕಚೇರಿ ಮುಂದೆ ಧರಣಿ ಕುಳಿತು ಧಿಕ್ಕಾರ ಕೂಗಿದ್ದಾರೆ.

ರಾಷ್ಟ್ರೀಯ ಅದ್ಯಕ್ಷ ಅಮಿತ್ ಶಾ ಹಾಗೂ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಿರುದ್ಧ ಧಿಕ್ಕಾರ ಕೂಗಿದ ಘಟನೆ ನಡೆದಿದೆ.
ಕೂಡಲೇ ಅಭ್ಯರ್ಥಿ ಬದಲಿಸಿ ಬಿಜೆಪಿ ಪಕ್ಷದ ನಿಷ್ಠಾವಂತರಿಗೆ ಟಿಕೆಟ್ ನೀಡುವಂತೆ ಪ್ರತಿಭಟನಾಕಾರರು ಆಗ್ರಹ ಮಾಡಿದರು.

ಜೆಡಿಎಸ್ ನೊಂದಿಗೆ ಶಾಮೀಲಾಗಿ ಡಮ್ಮಿ ಅಭ್ಯರ್ಥಿ ನಿಲ್ಲಿಸಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.


 



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಎನ್.ಮಹೇಶ್ ರಾಜೀನಾಮೆ: ಉಪಸಭಾಪತಿ ಹೇಳಿದ್ದೇನು ಗೊತ್ತಾ?

ಶಾಸಕ ಎನ್. ಮಹೇಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಉಪಸಭಾಪತಿ ಪ್ರತಿಕ್ರಿಯೆ ...

news

ಸಪ್ಲೈಯರ ಮಳಿಗೆಗೆ ಬಿತ್ತು ಬೆಂಕಿ

ಸಪ್ಲೈಯರ ಮಳಿಗೆಯಲ್ಲಿ ಬೆಂಕಿ ಅವಘಡ ಸಂಭವಿಸಿದ ಘಟನೆ ನಡೆದಿದೆ.

news

ಸಪ್ತಪದಿ ತುಳಿದ ಮಹಿಳಾ ನಿವಾಸಿಗಳು: ಹೆತ್ತವರಂತೆ ಮದುವೆ ಮಾಡಿಕೊಟ್ಟಿತು ಮಹಿಳಾ ನಿಲಯ

ಅಲ್ಲಿ ಇಂದು ಹೂವು, ಮಾವಿನ ತೋರಣ, ರಂಗೋಲಿಗಳಿಂದ ಆಲಂಕೃತಗೊಂಡ ನಿಲಯದಲ್ಲಿ ದೈನಂದಿನ ಕಚೇರಿ ಕೆಲಸದಲ್ಲಿ ...

news

Me Too ಬಗ್ಗೆ ನಟಿ ಶೃತಿ ಹರಿಹರನ್ ಹೇಳಿದ್ದೇನು ಗೊತ್ತಾ?

Me Too ಅಭಿಯಾನದ ಬಗ್ಗೆ ಕೇಳಿ ಖುಷಿ ಆಗುತ್ತಿದೆ. ಹೀಗಂತ ಚಿತ್ರನಟಿ ಶೃತಿ ಹರಿಹರನ್ ಹೇಳಿದ್ದಾರೆ.