ಲಿಂಗಿ ಪರಿವರ್ತಿತರ ಹಕ್ಕುಗಳ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡನೆಮಾಡುವುದರಿಂದ ಕೈಬಿಡಬೇಕು. ಹೀಗಂತ ಒತ್ತಾಯಿಸಿ ತೃತೀಯ ಲಿಂಗಿಗಳು ಪ್ರತಿಭಟನೆ ನಡೆಸಿದರು. ಬೆಂಗಳೂರಿನ ಟೌನ್ಹಾಲ್ ಮುಂಭಾಗದಲ್ಲಿ ತೃತೀಯಲಿಂಗಿಗಳು ಪ್ರತಿಭಟನೆ ನಡೆಸಿದರು. ಇದೇ ಸಂದರ್ಭದಲ್ಲಿ ರಾಜ್ಯಸಭೆಯಲ್ಲಿ ಮಂಡನೆಯಾದ ಮಸೂದೆಯನ್ನು ಅನುಮೋದನೆಗಾಗಿ ರಾಜ್ಯ ಸಭೆಯ ಆಯ್ಕೆ ಸಮಿತಿಗೆ ಶಿಫಾರಸ್ಸು ಮಾಡಬೇಕೆಂದು ತೃತೀಯಲಿಂಗಿ ಒಕ್ಕೊರಲಿನಿಂದ ಒತ್ತಾಯಿಸಿದ್ದಾರೆ. ಮಸೂದೆಯಲ್ಲಿ ತೃತೀಯ ಲಿಂಗಿಗಳೆಂದರೆ ಯಾರು ಎಂಬ ಬಗ್ಗೆ ಸ್ಪಷ್ಟವಾದ ವ್ಯಾಖ್ಯಾನವಿಲ್ಲ. ಬಹಳಷ್ಟು ತೃತೀಯ ಲಿಂಗಿಗಳು ತಮ್ಮನ್ನು ತಾವು ತೃತೀಯ ಲಿಂಗಿ ಎಂದು