ಕಬ್ಬಿನ ಬಾಕಿ ಪಾವತಿ ಮತ್ತು ಸಮರ್ಪಕ ಬೆಲೆನಿಗದಿಗೆ ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ವಿಕೋಪಕ್ಕೆ ತಿರುಗಿದೆ.ಬಾಗಲಕೋಟೆ ಜಿಲ್ಲೆ ಕಬ್ಬು ಬೆಳೆಗಾರರು ನಡೆಸುತ್ತಿರುವ ಪ್ರತಿಭಟನೆ ವಿಕೋಪಕ್ಕೆ ತಿರುಗಿದೆ. ತಮಗೆ ನ್ಯಾಯ ಸಿಗದ ಹಿನ್ನೆಲೆ ಆಕ್ರೋಶಗೊಂಡಿರುವ ರೈತರು ಕಬ್ಬು ಸಾಗಿಸುತ್ತಿದ್ದ ಐದು ಟ್ರ್ಯಾಕ್ಟರ್ ಗಳನ್ನು ಪಲ್ಟಿ ಹೊಡೆಸಿ ಆಕ್ರೋಶ ಹೊರಹಾಕಿದ್ದಾರೆ.ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಕುಳಲಿ ಗ್ರಾಮದ ಬಳಿ ಘಟನೆ ನಡೆದಿದೆ. ನಿರಾಣಿ ಶುಗರ್ಸ್ ಗೆ ಟ್ರ್ಯಾಕ್ಟರ್ ಗಳ ಮೂಲಕ ಕಬ್ಬನ್ನು ಸಾಗಿಸಲಾಗುತ್ತಿತ್ತು.