ರಸ್ತೆ ಮೇಲೆ ಶವ ಇಟ್ಟು ಪ್ರತಿಭಟನೆ ನಡೆಸಿ, ಮೃತನ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಆಗ್ರಹಿಸಿದ ಘಟನೆ ನಡೆದಿದೆ.ರಸ್ತೆ ಅಪಘಾತದಲ್ಲಿ ಕಲಬುರಗಿ ಪಂಚಶೀಲ ನಗರದ ಕಣರಪ್ಪ ಎಂಬುವರು ಸಾವನ್ನಪ್ಪಿದ್ದರು. ಅಪಘಾತ ಮಾಡಿದ ವಾಹನ ಚಾಲಕ ನಿಲ್ಲಿಸದೇ ಪರಾರಿಯಾಗಿದ್ದ. ಘಟನೆ ಖಂಡಿಸಿ ಹಾಗೂ ಮೃತನ ಕುಟುಂಬಕ್ಕೆ ಪರಿಹಾರ ಕೊಡಬೇಕೆಂದು ಆಗ್ರಹಿಸಿ ಬಡಾವಣ ನಿವಾಸಿಗಳು ಹಳೇ ಜೇವರ್ಗಿ ಮುಖ್ಯರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ರು.ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ರಸ್ತೆ ತಡೆ ನಿರ್ಮಾಣವಾಗಬೇಕೆಂದು ಪ್ರತಿಭಟನಾಕಾರರು ಒತ್ತಾಯ