ಇಡೀ ರಾಜ್ಯವೇ ಇವತ್ತು ಆ ಒಂದು ಹೋರಾಟದತ್ತ ಮುಖಮಾಡಿ ನಿಂತಿತ್ತು.ಯಾವ ಕ್ಷಣದಲ್ಲಿ ಏನಾಗುತ್ತೋ ಅನ್ನೋ ಕುತೂಹಲ ಒಂದೆಡೆಯಾದ್ರೆ, ನಮ್ಮ ಕೆಲಸ,ಕಾರ್ಯಗಳ ಗತಿಯೇನು ಅನ್ನೋ ಚಿಂತೆ ಜನರನ್ನ ತಮಗೆ ಗೊತ್ತಿಲ್ಲದಂತೆ ಆ ಪ್ರತಿಭಟನೆ ಕಡೆ ತಿರುಗಿನೋಡುವಂತೆ ಮಾಡಿತ್ತು. ಇತ್ತ ರಾಜ್ಯ ರಾಜಧಾನಿಯ ಆಡಳಿತ ಯಂತ್ರಕ್ಕೆ ಆ ಪ್ರತಿಭಟನೆಯ ಕಿಚ್ಚು ನಡುಕಹುಟ್ಟಿಸಿತ್ತು.ಇವತ್ತು ಆಸ್ಪತ್ರೆ ತೆಗೆಯಲ್ವಂತೆ, ಬಸ್ ಗಳು ರಸ್ತೆಗಿಳಿಯಲ್ವಂತೆ, ಡಾಕ್ಟರ್ ಬರ್ತಾರೋ ಇಲ್ವೋ ಗೊತ್ತಿಲ್ಲ..ವಿಧಾನಸೌಧನೇ ಖಾಲಿಯಂತೆ...ಇವತ್ತು ಸಿಲಿಕಾನ್ ಸಿಟಿ ಜನರ ಬಾಯಲ್ಲಿ ಕೇಳಿಬರ್ತಿದ್ದ