ಕಲಬುರಗಿ : ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ದಿವ್ಯಾಹಾಗರಗಿ, ಆರ್.ಡಿ. ಪಾಟೀಲ್ ಕಿಂಗ್ಪಿನ್ ಎಂಬುವುದನ್ನು ಒಪ್ಪುವುದಿಲ್ಲ. ಸಣ್ಣವರನ್ನೇ ಬಂಧಿಸಿ ದೊಡ್ಡದಾಗಿ ಸಾಧಿಸಿದವರಂತೆ ಸರ್ಕಾರ ಬಿಂಬಿಸಿಕೊಳ್ಳುತ್ತಿದೆ. ಕಿಂಗ್ಪಿನ್ಗಳು ಬೆಂಗಳೂರಲ್ಲಿ ಇದ್ದಾರೆ. ಅವರು ಸರ್ಕಾರದ ಒಳಗೂ ಇರಬಹುದು ಎಂದು ಶಾಸಕ ಪ್ರಿಯಾಂಕ ಖರ್ಗೆ ಹೇಳಿದ್ದಾರೆ. ಹಣ ವರ್ಗಾವಣೆಯಾದ ಹಿನ್ನೆಲೆ ಹಾಗೂ ತಲುಪಿದ ಜಾಗದ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಅಸಲಿ ಕಿಂಗ್ಪಿನ್ ಯಾರೆಂಬುದು ಹೊರಬರುತ್ತದೆ. ಹಗರಣದಲ್ಲಿ ಪ್ರಿಯಾಂಕ್ ಖರ್ಗೆ ಅವರ ಸುತ್ತಮುತ್ತಲಿನವರು ಇದ್ದಾರೆ