ಮದುವೆಯಾದ ಆರು ತಿಂಗಳುಗಳ ನಂತರ ವಧುವಿಗೆ ಹುಚ್ಚು ಹಿಡಿಯುತ್ತದೆ ಎಂದು ಭವಿಷ್ಯ ಹೇಳಿ ಮದುವೆ ಮುರಿದ ಕಳ್ಳಸ್ವಾಮಿಗೆ ಸಾರ್ವಜನಿಕರು ಧರ್ಮದೇಟು ಬಿದ್ದಿದೆ. ರೂಪಿನಾಳದ 30 ವರ್ಷ ವಯಸ್ಸಿನ ಕಳ್ಳಸ್ವಾಮಿ ಅಪ್ಪಿಸಾಬಖಿರಾಯಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ರೂಪಿನಾಳ ಗ್ರಾಮದಲ್ಲಿ ಎರಡು ಕುಟುಂಬಗಳ ಮಧ್ಯೆ ವಿವಾಹ ನಿಶ್ಚಿಯವಾಗಿತ್ತು. ಆದರೆ, ಮದುವೆಯಾದ ಆರು ತಿಂಗಳುಗಳ ಬಳಿಕ ಮದುಮಗಳಿಗೆ ಹುಚ್ಚು ಹಿಡಿಯುತ್ತದೆ ಎಂದು ಭವಿಷ್ಯ