ಬೆಂಗಳೂರು (ಆ. 16): ಸೋಂಕು ಕಡಿಮೆ ಇರುವ ಕಡೆ ಆಗಸ್ಟ್ 23ರಿಂದ ಶಾಲೆ ಆರಂಭಕ್ಕೆ ಸರ್ಕಾರ ಸಿದ್ದತೆ ನಡೆಸಿದ್ದು, ಈ ಸಂಬಂಧ ಮಾರ್ಗಸೂಚಿ ಪ್ರಕಟಿಸಿದೆ. ಪಾಸಿಟಿವಿಟಿ ರೇಟ್ 2ಕ್ಕಿಂತ ಕಡಿಮೆ ಇರುವ ಕಡೆ 9 ರಿಂದ ದ್ವಿತೀಯ ಪಿಯುಸಿ ವರೆಗೆ ಶಾಲೆ- ಕಾಲೇಜು ಆರಂಭ ಮಾಡುವಂತೆ ಸೂಚಿಸಿದ್ದು, ಶಾಲಾ -ಕಾಲೇಜುಗಳು ಸರ್ಕಾರ ಪ್ರಕಟಿಸಿರುವ ಈ ಮಾರ್ಗಸೂಚಿ ಅನುಸರಿಸುವುದು ಕಡ್ಡಾಯವಾಗಿದೆ. ಕಳೆದೊಂದು ವರ್ಷದ ಬಳಿಕ ಭೌತಿಕವಾಗಿ ಶಾಲೆ ಆರಂಭಕ್ಕೆ ಮುಂದಾಗುತ್ತಿರುವುದರಿಂದ, ಶಾಲಾ