ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ದಾಖಲೆ ಸಂಖ್ಯೆಯ 12 ಲಕ್ಷ ವಿದ್ಯಾರ್ಥಿಗಳಿ ಪಾಸಾಗಿದ್ದು, ಮರುದಿನವೇ ಅಂದರೆ ಇಂದಿನಿಂದಲೇ ಆಗಸ್ಟ್ 30ರವರೆಗೆ ದಂಡ ಶುಲ್ಕವಿಲ್ಲದ ದಾಖಲಾತಿ ಅವಕಾಶಕ್ಕೆ ಆದೇಶ ಹೊರಡಿಸಲಾಗಿದೆ. ಆಗಸ್ಟ್ ಬಳಿಕ ಪ್ರಥಮ ಪಿಯುಸಿಗೆ ದಾಖಲಾತಿ ಪಡೆಯಬೇಕಾದರೆ ದಂಡ ಪಾವತಿಸಬೇಕಿದ್ದು, ಸೆಪ್ಟೆಂಬರ್ 1 ರಿಂದ 11 ರವರೆಗೆ ದಾಖಲಾತಿ ಮಾಡಿಕೊಳ್ಳುವವರು ವಿಳಂಬ ಶುಲ್ಕವಾಗಿ 670 ರೂ. ಪಾವತಿಸಬೇಕಾಗುತ್ತದೆ. ಸೆಪ್ಟೆಂಬರ್ 11ರ ಬಳಿಕ ದಾಖಲಾತಿ ಇರುವುದಿಲ್ಲ. ಆದರೆ ವಿಶೇಷ ದಂಡ ರೂಪವಾಗಿ 2890 ರೂ