ಆಡಳಿತ ಪಕ್ಷ ಆಮ್ ಆದ್ಮಿಯ ಶಾಸಕ ಅಮಿತ್ ರತ್ತನ್ ಕೋಟ್ಛಟ್ಟಾ ಅವರನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಪಂಜಾಬ್ ವಿಜಿಲೆನ್ಸ್ ಬ್ಯುರೋ ಪಟಿಯಾಲದಲ್ಲಿ ಬಂಧಿಸಿದೆ. ಸಹಾಯಕ ನಾಲ್ಕು ಲಕ್ಷ ರೂ. ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದ. ಈ ಪ್ರಕರಣದಲ್ಲಿ ಬಟಿಂಡಾ ಗ್ರಾಮೀಣ ಕ್ಷೇತ್ರದ ಪ್ರತಿನಿಧಿಯಾಗಿರುವ ಕೋಟ್ಫಟ್ಟಾ ಅವರ ಪಾತ್ರ ಇರುವುದಕ್ಕೆ ಬಲವಾದ ಸಾಕ್ಷಿಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘುದ್ದಾ ಗ್ರಾಮದ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಲು ಕೋಟ್ಫಟ್ಟಾ ಮತ್ತು ಅವರ ಸಹಾಯಕ ಲಂಚಕ್ಕೆ