ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳು ಅಧಿಕವಾಗಿದ್ದು, ಹಲವು ಜೀವಗಳನ್ನು ಬಲಿ ಪಡೆದಿವೆ. ಎಷ್ಟು ಜನರು ಜೀವತೆತ್ತರೂ ಸಹ BBMP ಎಚ್ಚೆತ್ತುಕೊಂಡಿಲ್ಲ. ರಸ್ತೆ ಗುಂಡಿ ಬಗ್ಗೆ ಬಾಲಕಿ ವಿಡಿಯೋ ಮಾಡಿದ್ದು, ಅಧಿಕಾರಿಗಳಿಗೆ ಪುಟಾಣಿ ಚಳಿ ಬಿಡಿಸಿದ್ದಾಳೆ. ಕೆಲಗುಂಡಿಗಳು ಅಧಿಕ ತೂಕದ ವಾಹನ ಚಲಿಸುವುದರಿಂದ ಆದ್ರೆ, ಕೆಲ ಗುಂಡಿಗಳು ಕಾಮಗಾರಿ ಉದ್ದೇಶದಿಂದಾಗಿ ನಿರ್ಮಾಣ ಆಗಿರ್ತವೆ. ರಸ್ತೆ ಮಾಡಿ ಒಂದು ತಿಂಗಳು ಆಯ್ತು. ಮತ್ತೆ ರೋಡ್ನ್ನ ಹೊಂಡ ಮಾಡ್ತಿದ್ದಾರೆ. ನಮಗೆಲ್ಲ ಎಷ್ಟು ಕಷ್ಟ ಆಗ್ತಿದೆ ನೋಡಿ