ರಷ್ಯಾದ ವಶದಲ್ಲಿರುವ ಉಕ್ರೇನ್ನ ಜಪೋರಿಝಿಯಾ ಪರಮಾಣು ವಿದ್ಯುತ್ ಸ್ಥಾವರಕ್ಕೆ ಸ್ವತಂತ್ರ ತಪಾಸಕರು ಉಕ್ರೇನ್ ಮೂಲಕ ಭೇಟಿ ನೀಡುವುದಕ್ಕೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಒಪ್ಪಿಗೆ ಸೂಚಿಸಿದ್ದಾರೆ. ಈ ಮಾಹಿತಿಯನ್ನು ಫ್ರೆಂಚ್ ಪ್ರೆಸಿಡೆನ್ಸಿ ಹಂಚಿಕೊಂಡಿದ್ದು, ತಪಾಸಕರು ರಷ್ಯಾದ ಮೂಲಕ ಪರಮಾಣು ವಿದ್ಯುತ್ ಸ್ಥಾವರಕ್ಕೆ ಭೇಟಿ ನೀಡಬೇಕೋ ಅಥವಾ ಉಕ್ರೇನ್ ಮೂಲಕ ಭೇಟಿ ನೀಡಬೇಕೋ ಎಂಬ ಬಗ್ಗೆ ವಿವಾದ ಉಂಟಾಗಿತ್ತು. ಯುದ್ಧರಂಗದಲ್ಲಿ ರಷ್ಯನ್ನರ ಪ್ರಗತಿ ಸಂಪೂರ್ಣ ಕುಗ್ಗಿದೆ ಎಂದು ಅಮೆರಿಕ ಅಧಿಕಾರಿಯೊಬ್ಬರು ಹೇಳಿದ್ದಾರೆ.