1945ರಲ್ಲಿ ನಾಜಿ ಜರ್ಮನಿ ವಿರುದ್ಧ ರಷ್ಯಾ ಯುದ್ಧ ಜಯಿಸಿದಂತೆ 2022ರಲ್ಲಿಯೂ ನಾವು ಗೆಲುವು ಸಾಧಿಸಲಿದ್ದೇವೆ. 2ನೇ ಮಹಾ ಯುದ್ಧದಲ್ಲಿ ನಾಜಿಗಳನ್ನು ಸೋಲಿಸಲು ಶ್ರಮಿಸಿದ್ದ ಸೋವಿಯತ್ ಒಕ್ಕೂಟದ ಭಾಗವಾಗಿದ್ದ ದೇಶಗಳಿಗೆ ಅಭಿನಂದನೆಗಳು ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದರು. 2ನೇ ಮಹಾ ಯುದ್ಧದಲ್ಲಿ ಬರ್ಲಿನ್ ವಶಪಡಿಸಿಕೊಂಡು, ವಿಜಯ ಘೋಷಿಸಿದ 77ನೇ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪುಟಿನ್, ನಮ್ಮ ಸೈನಿಕರು 1945ರಂತೆ ಇಂದಿಗೂ ಕೊಳಕು ನಾಜಿಗಳ ವಿರುದ್ಧ ಹೋರಾಡುತ್ತಿದ್ದಾರೆ.