ಬೆಂಗಳೂರು: ಈ ಬಾರಿ ಯುವ ದಸರಾ ಉದ್ಘಾಟನೆ ಮಾಡಲು ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧುಗೆ ರಾಜ್ಯ ಸರ್ಕಾರದ ಪರವಾಗಿ ಸಿಎಂ ಯಡಿಯೂರಪ್ಪ ಪತ್ರ ಮುಖೇನ ಆಹ್ವಾನ ಕಳುಹಿಸಿದ್ದಾರೆ ಎನ್ನಲಾಗಿದೆ.ವಿಶ್ವ ವಿಖ್ಯಾತ ದಸರಾ ಆಚರಣೆ ವೇಳೆ ನಡೆಯುವ ಯುವ ದಸರಾ ಉತ್ಸವಕ್ಕೆ ಅಕ್ಟೋಬರ್ 1 ರಂದು ಚಾಲನೆ ನೀಡಲಾಗುವುದು. ಈ ಬಾರಿ ಯುವ ದಸರಾ ಉತ್ಸವಕ್ಕೆ ಹಲವು ಮಹಿಳೆಯರಿಗೆ ಸ್ಪೂರ್ತಿಯಾಗಿರುವ ಪಿವಿ ಸಿಂಧು ಕೈಯಿಂದ ಚಾಲನೆ ನೀಡಲು ಸರ್ಕಾರ ಚಿಂತನೆ