Widgets Magazine

ಸ್ಥಳದಲ್ಲೇ ನಕಲಿ ಕೀ ಮಾಡಿ ಕಾರು ಕದಿಯುತ್ತಿದ್ದ ಖತರ್ನಾಕ್ ಗ್ಯಾಂಗ್

ಬೆಂಗಳೂರು| Jagadeesh| Last Modified ಶನಿವಾರ, 19 ಅಕ್ಟೋಬರ್ 2019 (20:06 IST)
ಕಾರುಗಳನ್ನು ಗುರುತಿಸಿ ಅದಕ್ಕೆ ಹೊಂದುವಂತೆ ನಕಲಿ ಕೀಗಳನ್ನು ಸ್ಥಳದಲ್ಲೇ ಸಿದ್ಧಪಡಿಸಿ ಕಾರು ಎಗರಿಸುತ್ತಿದ್ದ ಜಾಲವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಅಂತರಾಜ್ಯ ಕಳ್ಳರು ಬೆಂಗಳೂರಿನ ಆಗ್ನೇಯ ವಿಭಾಗದ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಾರೆ.

ಬಂಧಿತ ಖತರ್ನಾಕ್ ಕಾರುಕಳ್ಳರಿಂದ 1 ಕೋಟಿ 70 ಲಕ್ಷ ಮೌಲ್ಯದ 16 ಕಾರ್ ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಬಂಧಿತ ಕಳ್ಳರ ಜೊತೆಗೆ ಕಾಲ್ ಗರ್ಲ್ ಕೂಡ ಇದ್ದಾಳೆ. ತಮಿಳುನಾಡು ಮೂಲದ ಪರಮೇಶ್ವರನ್ (37), ಚೆನ್ನೈನ ಸದ್ದಾಂ ಹುಸೇನ್ ಬಂಧಿತ ಕಾರುಕಳ್ಳರಾಗಿದ್ದಾರೆ.






ಇದರಲ್ಲಿ ಇನ್ನಷ್ಟು ಓದಿ :