ಹೋಮ್ ಕ್ವಾರಂಟೈನ್ ಬಿಟ್ಟು ಹೊರ ಬಂದರೆ ಜೈಲಿಗೆ ತಳ್ಳೋದು ಫಿಕ್ಸ್. ಭಟ್ಕಳದಲ್ಲಿ ಕರೋನಾ ಸೋಂಕು ಹರಡದಂತೆ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಪೊಲೀಸ್ ಇಲಾಖೆಯೊಂದಿಗೆ ಸೇರಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ ಎಂದು ಪಶ್ವಿಮವಲಯ ಡಿಐಜಿ ದೇವಜ್ಯೋತಿ ರಾಯ್ ಹೇಳಿದ್ದಾರೆ.ಭಟ್ಕಳದಲ್ಲಿ ಪೊಲೀಸ್ ಬಂದೋಬಸ್ತ್ ಬಗ್ಗೆ ಪರಿಶೀಲನೆ ನಡೆಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಬಂದವರು ತಮ್ಮ ಮಾಹಿತಿಯನ್ನು ಕಡ್ಡಾಯವಾಗಿ ತಾಲೂಕು ಆಡಳಿತಕ್ಕೆ ತಿಳಿಸಬೇಕು. ಅಲ್ಲದೇ ಅವರು