Widgets Magazine

ಹೊರಗಿನಿಂದ ಬರುವವರಿಗೆ ಕ್ವಾರಂಟೈನ್ ರಿಲೀಫ್; ರಾಜ್ಯ ಸರ್ಕಾರದಿಂದ ಹೊಸ ರೂಲ್ಸ್

ಬೆಂಗಳೂರು| pavithra| Last Modified ಶನಿವಾರ, 23 ಮೇ 2020 (09:08 IST)

ಬೆಂಗಳೂರು : ಹೊರಗಿನಿಂದ ಬರುವವರಿಗೆ ಕ್ವಾರಂಟೈನ್ ರಿಲೀಫ್ ನೀಡಲು ನಿರ್ಧಾರ ಮಾಡಿದೆ.

 

ರಾಜ್ಯ ಸರ್ಕಾರದಿಂದ ಈ ಹೊಸ ರೂಲ್ಸ್ ಜಾರಿಗೆ ಬರಲಿದ್ದು,  ಹೊರಗಿನಿಂದ ಬರುವವರಿಗೆ ಹೋಂ ಕ್ವಾರಂಟೈನ್ ಮಾಡಲು ನಿರ್ಧರಿಸಿದೆ. ಹೈರಿಸ್ಕ್ ರಾಜ್ಯಗಳಿಂದ ಬಂದ್ರೆ ಕ್ವಾರಂಟೈನ್. ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ದೆಹಲಿ, ರಾಜಸ್ಥಾನ, ಮಧ್ಯಪ್ರದೇಶಕ್ಕೆ ಕಂಡೀಷನ್ ಇರಲಿದೆ . ಉಳಿದ ರಾಜ್ಯಗಳಿಗೆ ಕ್ವಾರಂಟೈನ್ ಸಡಿಲ ಮಾಡಲಾಗಿದ್ದು, ಕ್ವಾರಂಟೈನ್ ಬದಲು ಹೋಂ ಕ್ವಾರಂಟೈನ್ ಮಾಡಲಾಗುವುದು.
 

10 ವರ್ಷದೊಳಗಿನ ಮಕ್ಕಳು, ಗರ್ಭಿಣಿಯರು, 80 ವರ್ಷ ಮೇಲ್ಪಟ್ಟವರಿಗೆ ಹೋಂ ಕ್ವಾರಂಟೈನ್ ಹಾಗೂ  ಗಂಭೀರ ಅನಾರೋಗ್ಯ ಸಮಸ್ಯೆಯುಳ್ಳವರು, ವೈದ್ಯಕೀಯ ರಕ್ಷಣಾ ಸಿಬ್ಬಂದಿಗೆ ಹಾಗೂ ವಿದೇಶದಿಂದ ಬರುವವರಿಗೆ ವಿನಾಯ್ತಿ ನೀಡಲಾಗುವುದು.

 

 

 
ಇದರಲ್ಲಿ ಇನ್ನಷ್ಟು ಓದಿ :