ಬೆಂಗಳೂರು: ಪರೀಕ್ಷೆ ಎಂದರೆ ಎಲ್ಲಾ ವಿದ್ಯಾರ್ಥಿಗಳಿಗೆ ಟೆನ್ಷನ್ ಇದ್ದೆ ಇರುತ್ತೆ. ಪ್ರಶ್ನೆ ಪತ್ರಿಕೆಯಲ್ಲಿ ಯಾವ ತರಹದ ಪ್ರಶ್ನೆ ಬರುತ್ತೆ ಎಂಬ ಕುತೂಹಲ, ಯಾವುದನ್ನು ಓದುವುದು, ಯಾವುದನ್ನು ಬಿಡುವುದು ಎಂಬ ಗೊಂದಲದಲ್ಲಿಯೇ ವಿದ್ಯಾರ್ಥಿಗಳು ಇರುತ್ತಾರೆ. ಆದರೆ ಇಂದು ಬಿ.ಕಾಂ 5ನೇ ಸೆಮಿಸ್ಟರ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಸುದ್ದಿ ಹರಿದಾಡುತ್ತಿದೆ. ಕೋಲಾರ ಸೇರಿದಂತೆ ಹಲವೆಡೆ ಪ್ರಶ್ನೆ ಪತ್ರಿಕೆ ಹರಿದಾಡುತ್ತಿದ್ದು, ವಿದ್ಯಾರ್ಥಿಗಳ ವಾಟ್ಸ್ ಆ್ಯಪ್ ನಲ್ಲೂ ಕಾಣಸಿಗುತ್ತಿದೆ. ಬೆಂಗಳೂರು ವಿವಿ ನಡೆಸುತ್ತಿರುವ ಇಂದು ಮಧ್ಯಾಹ್ನ