ಕಲಬುರ್ಗಿ: ಮಾಜಿ ಸಚಿವ ಖಮರುಲ್ ಇಸ್ಲಾಂ ಅವರ ಕೊನೆಯ ಆಸೆಯಂತೆ ಕಲಬುರಗಿ ಜಿಲ್ಲಾ ನ್ಯಾಯಾಲಯ ಹಿಂಭಾಗದಲ್ಲಿರುವ ಖಲಂದರ್ ಖಾನ್ ಕಬರಿಸ್ಥಾನನಲ್ಲಿ ಅಂತ್ಯಸಂಸ್ಕಾರ ನಡೆಸಲು ಕುಟುಂಬಸ್ಥರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಖಮರುಲ್ ಇಸ್ಲಾಂ ಅವರ ತಂದೆ, ತಾಯಿ, ಅಣ್ಣ ಸೇರಿದಂತೆ ಕುಟುಂಬದ ಮೃತ ಸದಸ್ಯರ ದಫನ್ ಇದೆ ಖಲಂದರ್ ಖಾನ್ ಕಬರಿಸ್ಥಾನದಲ್ಲಿ ನಡೆದಿದೆ. ವರ್ಷದ ಹಿಂದೆ ಇಲ್ಲಿಗೆ ಭೇಟಿ ನೀಡಿದ್ದ ಖಮರುಲ್ ಇಸ್ಲಾಂ, ತಮ್ಮ ಸಾವಿನ ನಂತರ ದಫನ್ ಇಲ್ಲಿಯೇ ಮಾಡುವಂತೆ ಹೇಳಿದ್ದರಂತೆ.