ಕಾಂಗ್ರೆಸ್ ನವರು ಇನ್ನೂ 100 ಕೋಟಿ ಕೊಟ್ಟಿಲ್ಲ: ಆರ್. ಅಶೋಕ್

ಬೆಂಗಳೂರು| Krishnaveni K| Last Modified ಗುರುವಾರ, 10 ಜೂನ್ 2021 (09:34 IST)
ಬೆಂಗಳೂರು: ಕೊರೋನಾ ಸಂಕಷ್ಟಕ್ಕೆ ಸ್ಪಂದಿಸಲು ಕಾಂಗ್ರೆಸ್ ನ ಎಲ್ಲಾ ಶಾಸಕರು, ಸಂಸದರು ತಮ್ಮ ಕ್ಷೇತ್ರನಿಧಿಯಿಂದ ಒಟ್ಟುಗೂಡಿಸಿ 100 ಕೋಟಿ ರೂ. ದೇಣಿಗೆ ನೀಡುವುದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಈ ಮೊದಲು ಘೋಷಿಸಿದ್ದರು. ಆದರೆ ಈ ಹಣ ಇನ್ನೂ ಬಂದಿಲ್ಲ ಎಂದು ಸಚಿವ ಆರ್. ಅಶೋಕ್ ಹೇಳಿದ್ದಾರೆ.
 


ಲಸಿಕೆಗಾಗಿ ಸರ್ಕಾರಕ್ಕೆ 100 ಕೋಟಿ ರೂ. ಕೊಡುವುದಾಗಿ ಕಾಂಗ್ರೆಸ್ ನವರು ಹೇಳುತ್ತಿದ್ದಾರೆ. ಆದರೆ ಯಾವುದೇ ಹಣವನ್ನು ಇದುವರೆಗೆ ಕೊಟ್ಟಿಲ್ಲ. ಸರ್ಕಾರದ ಹಣ ಹೇಗೆ ಖರ್ಚು ಮಾಡಬೇಕೆಂದು ನಮಗೆ ಗೊತ್ತಿದೆ. ಇದಕ್ಕೆ ಕಾಂಗ್ರೆಸ್ ನವರ ಸಲಹೆ ಬೇಕಾಗಿಲ್ಲ ಎಂದು ಅಶೋಕ್ ಹೇಳಿದ್ದಾರೆ.
 
ಕಾಂಗ್ರೆಸ್ ನವರು ಹಣ ಕೊಟ್ಟ ನಂತರ ಖರ್ಚು ಮಾಡುವುದು ಹೇಗೆಂದು ಮಾತನಾಡಲಿ. ಅವರು ಹಣ ಕೊಟ್ಟು ಲಸಿಕೆ ಕೇಳಿದರೆ ಅಷ್ಟನ್ನೂ ಕೊಡುತ್ತೇವೆ. ಉಚಿತವಾಗಿ ಲಸಿಕೆ ಕೊಡುತ್ತಿರುವುದು ಕೇಂದ್ರ ಸರ್ಕಾರ, ಅದರ ಕ್ರೆಡಿಟ್ ಪ್ರಧಾನಿ ಮೋದಿಯವರದ್ದು ಎಂದು ಅಶೋಕ್ ಕಾಂಗ್ರೆಸ್ ಗೆ ತಿರುಗೇಟು ನೀಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :