ಪುನೀತ್ ಪುತಾಳಿ ನೋಡಿ ರಾಘಣ್ಣ ಭಾವುಕ

ಬೆಂಗಳೂರು| geetha| Last Modified ಮಂಗಳವಾರ, 23 ನವೆಂಬರ್ 2021 (18:09 IST)
ನಗರದಲ್ಲಿನ ಬಿಬಿಎಂಪಿ ಆವರಣದಲ್ಲಿ ಇಡಲು ನಿರ್ಮಾಣವಾಗುತ್ತಿರುವ ದಿವಂಗತ ನಟ ಪುನೀತ್ ರಾಜ್ ಕುಮಾರ್ ಪುತ್ಥಳಿಗೆ, ನಟ ರಾಘವೇಂದ್ರ ರಾಜ್ ಕುಮಾರ್ ಮುತ್ತಿಟ್ಟು ಭಾವುಕರಾಗಿದ್ದಾರೆ.
ಅಪ್ಪು ಪುತ್ಥಳಿ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ.ಹೀಗಾಗಿ ಇಂದು ಪುತ್ಥಳಿ ವೀಕ್ಷಿಸಲು ರಾಘವೇಂದ್ರ ರಾಜ್ ಕುಮಾರ್ ಆಗಮಿಸಿದ್ದರು. ಡಾ.ರಾಜ್ ಪುತ್ಥಳಿಯನ್ನು ಕೂಡ ಶಿವದತ್ತ್ ನಿರ್ಮಿಸಿದ್ದು, ಆಗ ತಂದೆಯ ಪುತ್ಥಳಿ ನೋಡಲು ಆಗಮಿಸಿದ್ದೆ. ಇಂದು ತಮ್ಮನ ಪುತ್ಥಳಿ ನೋಡುವಂತಾಯಿತು ಎಂದು ರಾಘವೇಂದ್ರ ರಾಜ್ ಕುಮಾರ್ ಕಣ್ಣೀರು ಸುರಿಸಿದ್ದಾರೆ.
 
ಅಪ್ಪು ತರಾತುರಿಯಲ್ಲಿ ಹೋಗಿಬಿಟ್ಟರು. ಅವರ ಪುತ್ಹಳಿ ನಿರ್ಮಾಣಕ್ಕೆ ತರಾತುರಿ ಬೇಡ. ಚೊಕ್ಕವಾಗಿ ನಿಧಾನವಾಗಿ ಮಾಡಿ ಎಂದು ಕಲಾವಿದರಿಗೆ ರಾಘಣ್ಣ ಹೇಳಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :