ರಾಗಿ ಎಂದರೆ ದಕ್ಷಿಣ ಕರ್ನಾಟಕ ಜನರ ಬಾಯಲ್ಲಿ ನೀರು ಬರುವುದು ಸಹಜ. ಇನ್ನು ರಾಗಿ ಪ್ರಿಯರಿಗಾಗಿಯೇ ಹೆಚ್ಚು ರಾಗಿ ಮುದ್ದೆಗಳನ್ನು ಉಣ್ಣುವ ಸ್ಪರ್ಧೆ ಆಯೋಜಿಸಲಾಗಿತ್ತು ಎಂದರೆ ನಂಬಲೇಬೇಕು. ಮಂಡ್ಯ ಜಿಲ್ಲೆಯ ಮಂಗಲ ಗ್ರಾಮದಲ್ಲಿ ರಾಗಿ ಮುದ್ದೆ ಉಣ್ಣುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಹೆಚ್ಚು ರಾಗಿ ಮುದ್ದೆ ತಿಂದವರು ವಿಜೇತರಾಗುತ್ತಾರೆ. ಈ ಸ್ಪರ್ಧೆಯಲ್ಲಿ ನೂರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಅಂದಹಾಗೆ ಮಹಿಳೆಯರ ಸಂಖ್ಯೆ ಕಡಿಮೆ ಇರಲಿಲ್ಲ. ಏಕಕಾಲದಲ್ಲಿ ನಾಟಿಕೋಳಿ ಸಾರಿನ ಜತೆ