ಮೈಸೂರು: ಮೊನ್ನೆಯಷ್ಟೇ ಮೈಸೂರಿಗೆ ಜನಾಶೀರ್ವಾದ ಯಾತ್ರೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮೈಸೂರು ಪೇಟ ಧರಿಸಲು ನಿರಾಕರಿಸಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಿಜೆಪಿ ತಿರುಗೇಟು ನೀಡಿದೆ.ಈ ಬಗ್ಗೆ ವಿಡಿಯೋ ಟ್ವೀಟ್ ಮಾಡಿರುವ ಬಿಜೆಪಿ ನಾಯಕಿ ಶಿಲ್ಪಾ ಗಣೇಶ್, ನಮ್ಮ ರಾಜ್ಯದ ಜನರ ಪ್ರೀತಿ ಪ್ರತೀಕವಾದ ಮೈಸೂರು ಪೇಟವನ್ನು ತೊಡಲು ನಿರಾಕರಿಸುವ ರಾಹುಲ್ ಗಾಂಧಿಗೆ ನಮ್ಮ ಕನ್ನಡಿಗರ ಓಟು ಯಾಕೆ ಬೇಕು? ಆಯಾ ರಾಜ್ಯದ