ಬೆಂಗಳೂರು: ಅಗ್ಗದ ದರದ ಊಟ, ಉಪಾಹಾರ ಒದಗಿಸಲಿರುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಇಂದಿರಾ ಕ್ಯಾಂಟೀನ್ ಗೆ ರಾಹುಲ್ ಗಾಂಧಿ ಚಾಲನೆ ನೀಡಿದ್ದಾರೆ. ಜಯನಗರದ ಕನಕನಪಾಳ್ಯದಲ್ಲಿರುವವ ಇಂದಿರಾ ಕ್ಯಾಂಟೀನ್ ಶಾಖೆಯನ್ನು ಉದ್ಘಾಟಿಸಿದ್ದಾರೆ. ಈ ಮೂಲಕ ರಾಜಧಾನಿಯಲ್ಲಿ ಒಟ್ಟು 101 ಕ್ಯಾಂಟೀನ್ ಗೆ ಚಾಲನೆ ದೊರಕಿದೆ. ಇಲ್ಲಿ 10 ರೂ.ಗೆ ಊಟ ಮತ್ತು 5 ರೂ.ಗೆ ಉಪಾಹಾರ ದೊರೆಯಲಿದೆ.ಅಜ್ಜಿ ಹೆಸರಿನ ಕ್ಯಾಂಟೀನ್ ಉದ್ಘಾಟಿಸಿದ ಮೇಲೆ ಕ್ಯಾಂಟೀನ್ ಒಳಗೆ ಪರಿಶೀಲನೆ ನಡೆಸಿದ