ರಾಯಚೂರು: ಗುಜರಾತ್ ನಲ್ಲಿ ಮಾಡಿದಂತೆ ಇಲ್ಲೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಚುನಾವಣೆ ಸಂದರ್ಭದಲ್ಲಿ ದೇವಾಲಯಗಳಿಗೆ ಭೇಟಿ ಕೊಡುತ್ತಿರುವುದಕ್ಕೆ ಟೀಕೆಗಳು ವ್ಯಕ್ತವಾಗಿರುವುದಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ. ನಾನು ಈ ಮೊದಲೂ ದೇವಾಲಯಗಳಿಗೆ ಭೇಟಿ ಕೊಡುತ್ತಿದ್ದೆ, ಮುಂದೆಯೂ ಇದನ್ನು ಮಂದುವರಿಸುವೆ. ದೇವಾಲಯಗಳಿಗೆ ಭೇಟಿ ಕೊಡಲು ನನಗೆ ಖುಷಿಯಾಗುತ್ತದೆ ಎಂದು ಬಿಜೆಪಿ ಟೀಕೆಗಳಿಗೆ ರಾಹುಲ್ ಉತ್ತರಿಸಿದ್ದಾರೆ.ಬಿಎಸ್ ಯಡಿಯೂರಪ್ಪ ರಾಹುಲ್ ರ ದೇವಾಲಯ ಭೇಟಿ ಬಗ್ಗೆ ಟೀಕಿಸಿದ್ದರು. ಇದೀಗ ರಾಹುಲ್ ಪ್ರತಿಕ್ರಿಯೆ ನಂತರ ಬಿಜೆಪಿ