ಬ್ರಸೆಲ್ಸ್ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಒಂದು ವಾರದ ಯುರೋಪ್ ಪ್ರವಾಸಕ್ಕೆ ತೆರಳಿದ್ದು, ಯುರೋಪಿಯನ್ ಯೂನಿಯನ್ ವಕೀಲರು, ವಿದ್ಯಾರ್ಥಿಗಳು ಮತ್ತು ಭಾರತೀಯ ವಲಸಿಗರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಸೆಪ್ಟೆಂಬರ್ 7ರಂದು ಬ್ರಸೆಲ್ಸ್ನಲ್ಲಿ ಇಯು ವಕೀಲರನ್ನು ರಾಹುಲ್ ಗಾಂಧಿ ಭೇಟಿ ಮಾಡಲಿದ್ದು, ಹೇಗ್ನಲ್ಲಿಯೂ ಇದೇ ರೀತಿಯ ಸಭೆಯನ್ನು ನಡೆಸಲಿದ್ದಾರೆ. ಮೂಲಗಳ ಪ್ರಕಾರ, ರಾಗಾ ಸೆಪ್ಟೆಂಬರ್ 8ರಂದು ಪ್ಯಾರಿಸ್ನ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.ಸೆಪ್ಟೆಂಬರ್ 9ರಂದು ರಾಹುಲ್